
ಮಂಗಳೂರು: ಪತ್ನಿಯನ್ನು ಅಪಹರಿಸಿದ್ದ ಪತಿ ಮಹಾಶಯ ಕೊನೆಗೂ ಪೊಲೀಸ್ ಬಲೆಗೆ ಬಿದ್ದಿದ್ದು, ಮಂಗಳೂರು ಗ್ರಾಮಾಂತರ ಪೊಲೀಸರು ನಿನ್ನೆ ಆರೋಪಿಗಳನ್ನು ನೆಲ್ಯಾಡಿಯ ಅಲ್ರಾ ಎಂಬಲ್ಲಿ ಬಂಧಿ ಸಿದ್ದಾರೆ.
ತನ್ನಿಂದ ದೂರವಾಗಲು ವಿಚ್ಛೇದನ ಕೋರಿರುವ ಪತ್ನಿಯ ಜೊತೆ ತಾನು ಬಾಳುವ ಉದ್ದೇಶದಿಂದ ಆಕೆಯನ್ನು ಅಪಹರಿಸಿದ್ದೇನೆಯೇ ಹೊರತು ಬೇರಾವ ದುರುದ್ದೇಶದಿಂದ ಅಲ್ಲ ಎಂದು ಆರೋಪಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಎಂಪಸಿಸ್ ಕಾಲ್‌ಸೆಂಟರ್ ಉದ್ಯೋಗಿ ನೀರುಮಾರ್ಗ ಕೆಲ್ರಾಯಿ ನಿವಾಸಿ ಫಿಲೋಮಿನಾ ಸೆರಾವೋ, ಆರು ವರುಷದ ಹಿಂದೆ ಮೇರ‍್ಲ ಪದವು ನಿವಾಸಿ ಕಿರಣ್ ಜೋನ್ಸ್ ಪಿರೇರಾ ಎಂಬಾತನನ್ನು ಪ್ರೀತಿಸಿ ವಿವಾಹವಾ ಗಿದ್ದರು. ಆದರೆ ಮದುವೆಯಾದ ವರು ಷದೊಳಗೆ ಪತಿ ಕಿರುಕುಳ ನೀಡಲು ಆರಂಭಿಸಿದ್ದ.
ತಾನು ಪ್ರೀತಿಸಿದಾತನ ನಿರಂತರ ಹಿಂಸೆಯಿಂದ ನೊಂದ ಫಿಲೋಮಿನಾ ಗಂಡನಿಂದ ಬಿಡುಗಡೆಯನ್ನು ಬಯಸಿ ವಿವಾಹ ವಿಚ್ಛೇದನವನ್ನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಮಾತ್ರವಲ್ಲದೆ ತವರು ಮನೆಯನ್ನು ಸೇರಿದ್ದಳು. ಆದರೆ ಈ ವಿವಾಹ ವಿಚ್ಛೇದನವನ್ನು ಒಪ್ಪದ ಪತಿ ಮಹಾಶಯ ಪತ್ನಿಯನ್ನು ಹೇಗಾದರೂ ಮಾಡಿ ಸೇರಲೇ ಬೇಕೆಂದು ಹಲವಾರು ಬಾರಿ ಪ್ರಯತ್ನಿಸಿದ್ದ. ಆದರೆ ಸರಿ ಆಗುತ್ತೇನೆ ಎಂದು ಹೇಳುತ್ತಲೇ ಬಂದಿದ್ದ ಕಿರಣ್ ಮಾತ್ರ ಬದಲಾಗಲೇ ಇಲ್ಲ. ಈ ಕಾರಣದಿಂದ ಆತನ ಮೇಲಿನ ವಿಶ್ವಾಸವನ್ನೇ ಕಳೆದುಕೊಂಡಿದ್ದ ಫಿಲೋಮಿನಾ ಪತಿ ಮಾತಿಗೆ ಸೊಪ್ಪು ಹಾಕಲೇ ಇಲ್ಲ. ಇದರಿಂದ ಕ್ರೋಧಗೊಂ ಡಿದ್ದ ಕಿರಣ್ ತಾನು ಪತ್ನಿಯನ್ನು ಹೇಗಾದರೂ ಮಾಡಿ ಸೇರಲೇಬೇಕೆಂದು ಯೋಚಿಸಿ ಅಪಹರಣದ ತಂತ್ರ ಹೆಣೆದಿದ್ದ. ಅದರಂತೆ ಕೆಲಸಕ್ಕೆಂದು ಸಂಸ್ಥೆಯ ಕಾರಿನಲ್ಲಿ ತೆರಳುತ್ತಿದ್ದ ಪತ್ನಿಯನ್ನು ತನ್ನ ಸ್ನೇಹಿತರ ಜೊತೆ ಸೇರಿ ಅಪಹರಿಸಿದ ಕಿರಣ್ ಆಕೆಯನ್ನು ನೆಲ್ಯಾಡಿಯ ಅಲ್ರಾ ಎಂಬಲ್ಲಿಯ ತನ್ನ ಬಾಡಿಗೆ ಮನೆಯಲ್ಲಿ ಇರಿಸಿಕೊಂಡಿದ್ದ.
ಕಿರಣ್ ಪತ್ನಿಯನ್ನು ಅಪಹರಿಸಲು ಬಳಸಿದ್ದ ಕಾರಿನ ನಂಬರ್ ನಿನ್ನೆಯೇ ಪೊಲೀಸರಿಗೆ ದೊರೆತಿರುವ ಕಾರಣ ಅದರ ಆಧಾರದಲ್ಲಿ ಕಾರಿನ ಚಾಲಕನನ್ನು ಪೊಲೀಸರು ಪತ್ತೆ ಹಚ್ಚಿದ್ದರು. ನಿನ್ನೆ ರಾತ್ರಿಯೇ ಆತನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿತ್ತು. ಆದರೆ ಪೊಲೀಸ್ ವಿಚಾರಣೆ ಜೋರಾಗುತ್ತಿರುವಂತೆ ಸತ್ಯವನ್ನು ಬಾಯ್ಬಿಟ್ಟಿದ್ದ. ಆತ ನೀಡಿದ ಮಾಹಿತಿ ಆಧಾರದಲ್ಲಿ ಇಂದು ಮುಂಜಾನೆ ಪೊಲೀಸರು ನೆಲ್ಯಾಡಿ ಅಲ್ರಾದಲ್ಲಿರುವ ಮನೆಗೆ ದಾಳಿ ಮಾಡಿ ಫಿಲೋಮಿನಾ ಅವರನ್ನು ರಕ್ಷಿಸಿದ್ದು ಕಿರಣ್ ಹಾಗೂ ಇತರ ಮೂವರನ್ನು ಬಂಧಿಸಿದ್ದಾರೆ.
ಅತ್ಯಾಚಾರ ನಡೆದಿದೆಯೇ?
ಅಪಹರಿಸಿದ ಮೇಲೆ ಫಿಲೋಮಿನಾ ಮೇಲೆ ಪತಿ ಕಿರಣ್ ಅತ್ಯಾಚಾರ ಮಾಡಿರುವ ಸಾಧ್ಯತೆ ದಟ್ಟವಾಗಿದೆ. ಗಂಡಹೆಂಡತಿಯ ರಾಗಿದ್ದರೂ ಪತ್ನಿಯ ಒಪ್ಪಿಗೆ ಇಲ್ಲದೆ ಪತಿ ಸಂಭೋಗ ನಡೆಸುವುದು ಅತ್ಯಾ ಚಾರಕ್ಕೆ ಸಮ ಎಂಬ ಕೋರ್ಟ್ ತೀರ್ಪೇ ಇದೆ. ಹೀಗಾಗಿ ಪೊಲೀ ಸರು ಫಿಲೋಮಿನಾಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿ ಸಿದ್ದಾರೆ ಎನ್ನಲಾಗಿದೆ. ಲೈಂಗಿಕ ಬಲವಂತ ನಡೆದಿದ್ದರೆ ಕಿರಣ್ ಮೇಲೆ ಅತ್ಯಾಚಾರ ಮಾಡಿದ ದೂರು ದಾಖಲಾಗುತ್ತದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ