ಮಂಗಳೂರು: ನಂತೂರು ಪದುವಾ ಬಳಿ ಪಾರಂಪರ‍್ಯವಾಗಿ ವಾಸವಿದ್ದು ತಾವಿರುವ ಜಾಗವನ್ನು ತಮ್ಮ ಹೆಸರಿಗೆ ವರ್ಗಾಯಿಸಿ ಕೊಡಬೇಕು ಎಂದು ಹೋರಾಡಿದ ಮಹಿಳೆಯರಿಬ್ಬರು ಕೊನೆಗೂ ನ್ಯಾಯಾಲಯದ ತೀರ್ಪಿನಿಂದಾಗಿ ಮನೆ ತೊರೆಯಬೇಕಾಗಿದೆ.
ಪದುವಾ ಮೇಲ್ಕಟ್ಟೆ ಕಂಪೌಂಡ್‌ನಲ್ಲಿರುವ ಸರ್ವೇ ನಂಬ್ರ ೩೯-೩ ರಲ್ಲಿ ಮೂರು ಸೆಂಟ್ಸ್ ಜಾಗ ದಲ್ಲಿ ಹಲವು ವರ್ಷಗಳಿಂದ ಗಿರಿಜಾ ಸಪಲ್ಯ ಮತ್ತು ವೆಂಕಮ್ಮ ಎಂಬವರ ಕುಟುಂಬ ವಾಸವಾಗಿದ್ದು ಬಳಿಕ ಅವರೆಲ್ಲಾ ಮನೆ ತೊರೆದಿದ್ದರಿಂದ ನಿರ್ಗತಿಕರಾದ ಮಹಿಳೆಯರಿಬ್ಬರೇ ವಾಸವಿದ್ದರು.
ಆದರೆ ಜಾಗದ ಮಾಲಿಕರಾದ ಬಾಲಕೃಷ್ಣ ಶೆಟ್ಟಿಯವರ ಸಹೋದರಿ ಲೀಲಾವತಿ ಶೆಟ್ಟಿಯವರು ನ್ಯಾಯಾಲ ಯದ ಮೊರೆ ಹೋಗಿದ್ದ ಕಾರಣ ತೀರ್ಪು ಅವರ ಪರವಾಗಿ ಬಂದಿತ್ತು. ಆದರೂ ಮಹಿಳೆಯರು ತಡೆಯಾಜ್ಞೆ ತಂದಿದ್ದರಾದರೂ ಮೊನ್ನೆ ಅದು ಕೂಡ ತೆರವುಗೊಂಡಿತ್ತು. ಇದರಿಂದಾಗಿ ಮನೆಯನ್ನು ತೊರೆಯಬೇಕಾದ ಅನಿವಾರ್ಯತೆ ಬಂದಿದೆ. ಆದರೂ ಕದ್ರಿ ಠಾಣೆಯಲ್ಲಿ ಜಾಗದ ಮಾಲಿಕರು ಮತ್ತು ನ್ಯಾಯವಾದಿಯ ಸಮ್ಮುಖದಲ್ಲಿ ಮಾತುಕತೆ ನಡೆಸಿ ಮಾನವೀಯ ನೆಲೆಯಲ್ಲಿ ಸೋಮವಾರದವರೆಗೆ ಅಲ್ಲಿಯೇ ಇರಲು ಅವಕಾಶ ಕಲ್ಪಿಸಲಾ ಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ